Ravi D Channannavar
Quick Facts
Biography
ರವಿ ಧ್ಯಾಮಪ್ಪ ಚನ್ನಣ್ಣನವರ್ ಕರ್ನಾಟಕದ ಒಬ್ಬಭಾರತೀಯ ನಾಗರಿಕ ಸೇವಕ. ಇವರು ೨೦೦೮ ರ ತಂಡದಲ್ಲಿ ತರಭೇತು ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿ. .
ಆರಂಭಿಕ ಜೀವನ ಮತ್ತು ಶಿಕ್ಷಣ
ರವಿ ಅವರು ಗದಗ ತಾಲೂಕಿನ ನೀಲಗುಂದ ಗ್ರಾಮದ ಕೃಷಿ ಕುಟುಂಬದಲ್ಲಿ ೨೩ ಜುಲೈ ೧೯೮೫ ರಂದು ಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗೆ ಜನಿಸಿದರು. ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ,ಗದಗದಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.ತಮ್ಮ ಶೈಕ್ಷಣಿಕ ವೆಚ್ಚಗಳು ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಸಲು ಅವರು ಅರೆಕಾಲಿಕ ಕೆಲಸ ಮಾಡುತ್ತಿದ್ದರು.. .ಮೇ ೨೦೦೭ ರಲ್ಲಿ, ಐಎಎಸ್ ಪರೀಕ್ಷೆಯ ತರಭೇತಿಯನ್ನು ಅವರು ಹೈದರಾಬಾದ್ ನಲ್ಲಿ ಪಡೆದರು..೨೦೦೮ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ)ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ೭೦೩ ನೇ ಸ್ಥಾನ ಪಡೆದರು.ಇವರು ತ್ರಿವೇಣಿಯವರನ್ನು ವಿವಾಹವಾಗಿದ್ದಾರೆ.
ವೃತ್ತಿಜೀವನ
ರವಿ ಅವರು ೨೦೧೧ ರಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತದನಂತರ ಧಾರವಾಡ, ಹೊಸಪೇಟೆ, ಹಾಸನ, ಬೆಂಗಳೂರು, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ ನಂತರ 2018ಅವರು ಬೆಂಗಳೂರುನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇತರ ಸೇವೆಗಳು
ಬೆಳಗಾವಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ ಸಮಯದಲ್ಲಿ ನಡೆದ ಕೋಮು ಗಲಭೆಯಲ್ಲಿ ಕಾರ್ಯ ನಿರ್ವಹಣೆ..೨೦೧೫ ರಲ್ಲಿ ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರವನ್ನುಹತೋಟಿಗೆ .ಮಹಿಳಾ ಸುರಕ್ಷತೆಯನ್ನು ಉತ್ತೇಜಿಸಲು "ಒನಕೆ ಓಬವ್ವ ಪಡೆ ರಚನೆ..ಸ್ವಯಂ ಸುರಕ್ಷತೆ ತರಬೇತಿ, ಜನ ಸ್ನೇಹಿ ಪೊಲೀಸ್ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು.ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡಲು ಪೊಲೀಸ್ ಕ್ಯಾಂಟೀನ್ ಮತ್ತು ಪೊಲೀಸ್ ವೈದ್ಯಕೀಯ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಲಹೆ..ರೈತರಿಗೆ ಸಹಾಯವಾಗಲೆಂದು "ನಮ್ಮೂರಲೊಬ್ಬ ಸಾಧಕ" ಯೋಜನೆಯನ್ನು ಪ್ರಾರಂಭಿಸಿದರು.ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಉಚಿತ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯು.ಪಿ.ಎಸ್.ಸಿ) ಪರೀಕ್ಷೆಗೆ ತರಬೇತಿ ನೀಡಲು ಪ್ರಾರಂಭಿಸಿದರು.