Harry D Cruz
Quick Facts
Biography
ಹ್ಯಾರಿ (ಹರಿಹರನ್ ಜನ್ಮ ಹೆಸರು), ೨೩ ಅಕ್ಟೋಬರ್ ೧೯೯೭ ರಂದು ಜನಿಸಿದರು. ಹರಿಹರನ್ ಅವರನ್ನು ಹ್ಯಾರಿ ಡಿ ಕ್ರೂಜ್ ಎಂಬ ರಂಗನಾಮದಿಂದ ಜನಪ್ರಿಯವಾಗಿ ಕರೆಯುತ್ತಾರೆ. ಇವರು ಕಜ಼ೂ ವಾದ್ಯವನ್ನು ಬಳಸಿಕೊಂಡು ಬೀಟ್‌ಬಾಕ್ಸ್ ಮಾಡಿದ ಮೊದಲ ಭಾರತೀಯ. ಇವರು ಸ್ಯಾಕ್ಸೋಫೋನ್ ಬಳಸಿ ಧ್ವನಿ ಉತ್ಪಾದಿಸಿದ ಭಾರತೀಯ. ತನ್ನ ಧ್ವನಿಯಿಂದ ಸ್ಯಾಕ್ಸೋಫೋನ್ ಶಬ್ದವನ್ನು ಹೊರಡಿಸುತ್ತಾರೆ. ಇವರನ್ನು ದಿ ಹೈ ರೇಂಜ್ ಬುಕ್ ಆಫ಼್ ವರ್ಲ್ಡ್ ರೆಕಾರ್ಡ್ ಗುರುತಿಸಿದೆ. ಇವರು ಕಜ಼ೂ ವಾದ್ಯವನ್ನು ಬೀಟ್‌ಬಾಕ್ಸಿಂಗ್‌ನೊಂದಿಗೆ ಬಳಸಿದ್ದಾರೆ.
ಜನನ
ಇವರ ಜನ್ಮ ಹೆಸರು ಹರಿಹರನ್. ಇವರು ೨೩ ಅಕ್ಟೋಬರ್ ೧೯೯೭ ರಂದು ಜನಿಸಿದರು. ಇವರ ತಂದೆ- ಸೇಕರಮಲ್ಲಿಕರಾಜ್ ಮತ್ತು ತಾಯಿ- ಕೋತೇಶ್ವರಿ. ಹ್ಯಾರಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಂಗೀತ ವೃತ್ತಿಯನ್ನು ಪ್ರಾರಂಭಿಸಿದರು.
ವಿದ್ಯಾಭ್ಯಾಸ
ಬೆಂಗಳೂರಿನ ಇಂಡಿಯನ್ ಅಕಾದೆಮಿ ಕಾಲೇಜಿನಲ್ಲಿ Archived 2020-11-29 ವೇಬ್ಯಾಕ್ ಮೆಷಿನ್ ನಲ್ಲಿ. ಪದವಿ ಪಡೆದ ನಂತರ, ಸೈಂಟ್ ಜಾರ್ಜ್ ಕಾಲೇಜ್‌ನಲ್ಲಿ Archived 2020-11-28 ವೇಬ್ಯಾಕ್ ಮೆಷಿನ್ ನಲ್ಲಿ. ಎಂ.ಬಿ.ಎ. ಪದವಿಯನ್ನು ಪಡೆದರು.
ವೃತ್ತಿ ಜೀವನ
ಇವರು ಬೀಟ್‌ಬಾಕ್ಸರ್, ಬೀಟ್‌ಬಾಕ್ಸಿಂಗ್ ಕೋಚ್, ಎಂಟರ್‌ಟೈನರ್ ಆಗಿದ್ದಾರೆ. ಇವರು ಧ್ವನಿ ತಂತಿಗಳನ್ನು ಬಳಸಿ ಸ್ಯಾಕ್ಸೋಫೋನ್‌ನ ಸಾಮರಸ್ಯವನ್ನು ತಯಾರಿಸುವ ಅತ್ಯುತ್ತಮ ಪ್ರತಿಭೆ.
ಸಾಧನೆಗಳು
- ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ ಹ್ಯಾರಿ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಯನ್ನು ಗಳಿಸಿದ್ದಾರೆ.
- ಭಾರತದ ಮೊದಲ ಕಜ಼ೂ (kazoo) ಬೀಟ್‌ಬಾಕ್ಸರ್.
- ೨೦೧೯ರಲ್ಲಿ ಎರ್ನಾಕುಲಂನಲ್ಲಿ ನಡೆದ ಕೇರಳ ಬೀಟ್ಬಾಕ್ಸ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ್ದರು.
- ಇವರನ್ನು "ದಿ ಹೈ ರೇಂಜ್ ಬುಕ್ ಆಫ಼್ ವರ್ಲ್ಡ್ ರೆಕಾರ್ಡ್" ಗುರುತಿಸಿದೆ.
- ಅವರು ೨೦೧೯ ರಲ್ಲಿ ಟಿಇಡಿಎಕ್ಸ್ ಎಬಿಬಿಎಸ್ ನಲ್ಲಿ (TEDx ABBS) ಪ್ರಮಾಣೀಕೃತ ಪ್ರದರ್ಶಕರಾಗಿದ್ದಾರೆ ಹಾಗು ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಏರ್ಪಡಿಸಿದ TEDXNCHE, TEDXGAT, TEDx ABBS, TEDX ನಲ್ಲಿ ಒಟ್ಟು ೪ ಬಾರಿ ಪ್ರದರ್ಶನ ನೀಡಿದ್ದಾರೆ.
- ನಾಗರಾಜುನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಐಕೆವೈಎ ೨೦೧೮ ಫಿಯೆಸ್ಟಾ ಎಂದು ಕರೆಯಲ್ಪಡುವ ಬೆಂಗಳೂರಿನ ಅತಿದೊಡ್ಡ ಉತ್ಸವವನ್ನು ಹ್ಯಾರಿ ಅವರು ತೀರ್ಪುಗಾರರಾಗಿದ್ದರು.
- ಇವರ ಬೀಟ್ಬಾಕ್ಸಿಂಗ್ ಪ್ರತಿಭೆಯನ್ನು ಪ್ರದರ್ಶಿಸಲು, ೨೫ ಡಿಸೆಂಬರ್ ೨೦೧೮ ರಂದು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಇನ್ನೋವೇಟಿವ್ ವೈನ್ ಉತ್ಸವದಲ್ಲಿ ತಮ್ಮ ಬೀಟ್ಬಾಕ್ಸಿಂಗ್ ಪ್ರತಿಭೆಯನ್ನು ಪ್ರದರ್ಶಿಸಿದರು.